Henge Song Lyrics – Rajesh Krishnan

0

Henge song lyrics in Kannada. This song is sung by Rajesh Krishnan and while song lyrics are penned by Manohar R Brahmavar, Vikram vasisht. music is composed by Vikram Chandana.

Henge Song Lyrics in Kannada

ಹೆಂಗೇ

ಗಂಗಮ್ಮ …..

ಕಲ್ಲೇಟಿಗಿಂತ ನಿನ್ನ
ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ
ನನ್ನ ಎದೆಯಲ್ಲಿ ಢವಢವ ಢವಢವ

ಭೂಮಿಯಾಗೆ ಇಷ್ಟು ಚಂದ ನೀನೊಬ್ಳೆ
ಅನ್ಸ್ತದೆ ನಂಗೇ
ಯಾವದಪ್ಪ ಈ ಅಂದ
ಊರೆಲ್ಲಾ ಕೇಳ್ತೈತೆ ಹೆಂಗೇ॥2॥

ಹಿಂಗೆಲ್ಲಾ ನೋಡಂಗಿಲ್ಲ
ಹೆಂಗೆಂಗೊ ಆಯ್ತದೆ
ಪ್ರೀತೀಲಿ ಬೀಳಂಗಿಲ್ಲ
ಪ್ರಾಣನೆ ಹೋಗ್ತದೆ

ಇರಲಾರದೆ ಹೃದಯಾನ
ಪರಪರನೆ ಕೆರಕೊಂಡೆ ಸುಮ್ಮಗೆ
ನೋವಾದಾಗ ಲೋಕಗೆ ಮದ್ದುಕೊಡೋರ್ ಯಾರವ್ರೆ ನಮ್ಗೆ

ಭೂಮಿಯಾಗೆ ಇಷ್ಟು ಚಂದ ನೀನೊಬ್ಳೆ
ಅನ್ಸ್ತದೆ ನಂಗೇ
ಯಾವದಪ್ಪ ಈ ಅಂದ
ಊರೆಲ್ಲಾ ಕೇಳ್ತೈತೆ ಹೆಂಗೇ

ಆ ಕೂದಲ ಕಂಡಾಗ
ರೇಷ್ಮೆ ನೆನಪಾಯ್ತದೆ
ನೀ ಎದುರು ನಿಂತಾಗ
ಲೋಕ ಮರೆತೋಯ್ತದೆ
ಹೆಂಡಿಸು ಆ ನಡಿಗೆ
ನೌಲೆ ನಾಚ್ತದೆ
ಏನು ಸೊಗಸು ಆ ನೋಟ
ಭೂಮಿ ಬೆರಗಾಗ್ತದೆ
ನಿಂತೋಳ ಸೇರೋ ಆಸೆ ಆಗ್ತೈತೆ ನಂಗೇ
ನೀನೆ ಎಲ್ಲಾ ಅಂತ ಮನಸ್ಸು ಹೇಳ್ತೈತೆ ಹೆಂಗೇ

ಭೂಮಿಯಾಗೆ ಇಷ್ಟು ಚಂದ ನೀನೊಬ್ಳೆ
ಅನ್ಸ್ತೈತೆ ನಂಗೇ
ಯಾವದಪ್ಪ ಈ ಅಂದ
ಊರೆಲ್ಲಾ ಕೇಳ್ತೈತೆ ಹೆಂಗೇ

ಲವ್ ಮಾಡಿದ್ಮೇಲೆ ಪ್ರಪೋಸ್ ಮಾಡಬೇಕು
ಸುಮ್ಮನೆ ಕೂರಬೇಡ ಕಣೊ ಬೆಪ್ಪ
ಬಾಳಲ್ಲಿ ಬರ್ಕತ್ತೆ ಇಲ್ವಾ
ತೋಳಲ್ಲಿ ತಾಕತ್ತೇ ಇಲ್ವಾ
ದುಡಿಯೋಕೆ ದುಬಾರಿ
ನಿನ್ನ ಹಿಂದೆ ದೋಸ್ತ್ ಗಳು ಸಖತ್ತಾಗಿ ಇಲ್ವಾ

ಏನು ಚಂದಾ ಆ ಕಣ್ಣು
ಮುದ್ದು ಮುದ್ದಾಗಿ ಕಾಣ್ತದೆ
ಏನ್ ಅಂದ ಆ ಕೆನ್ನೆ
ಕೆಂಪು ಕೆಂಪಾಗಿ ಹೊಳಿತದೆ
ದೇವರಾಣೆ ಆ ದೇವರಿಗೆ ಕೈಯ ಮುಗಿಯಬೇಕು ಇಂದೇ
ಯಾರಾನ ಹೇಳ್ರಪ್ಪ ದೇವಾಸ್ಥಾನಕ್ಕೆ ದಾರಿಯ ಮುಂದೆ

ನಂಗಾಗಿ ಈ ಸೃಷ್ಟಿ ಆಗೈತೆ ಅಂತಾನೆ ಬಂದೆ
ಸತ್ಯಾನೆ ಹೇಳ್ತಿವ್ನಿ ನನ್ನ ದೃಷ್ಟಿ ತಾಗೈತೆ ನಿಂಗೇ
ಹೆಳಕ್ಕೂ ಕೇಳಕ್ಕೂ ಇನ್ನೇನು ಉಳಿದೈತೆ ಮುಂದೆ
ಹಾಫ್ ಬಾಟ್ಲು ದೇವದಾಸು ನಾಯಿನು ನಂದೇ

ಭೂಮಿಯಾಗೆ ಇಷ್ಟು ಚಂದ ನೀನೊಬ್ಳೆ
ಅನ್ಸ್ತೈತೆ ನಂಗೇ
ಯಾವದಪ್ಪ ಈ ಅಂದ
ಊರೆಲ್ಲಾ ಕೇಳ್ತೈತೆ ಹೆಂಗ

Leave A Reply

Your email address will not be published.