Nana Mele Nanageega Song Lyrics – Kannadakkagi Ondannu Otti Movie

0

Nana Mele Nanageega Song Lyrics in Kannada

ನನಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ..
ಸನ್ನೆಯಲ್ಲೇ ಏನೇನೊ ಹೇಳುವಾಗ,
ಎಲ್ಲ ಮಾತು ನನ್ನಲ್ಲೇ ಬಾಕಿ ಇಗ,
ಸರಿ ಹೋಗುವಾ ಮುನ್ಸೂಚನೆ ಇತ್ತೀಚೆಗೆ ಸುಳಿದಾಡಿದೆ
ನನಮೇಲೆ ನನಗೀಗ ಅನುಮಾನ ಶುರುವಾಗಿದೆ..

ಭೇಟಿಯಾದ ಜಾಗ ನನ್ನನ್ನೇ ಕಾಯುವಾಗ
ಎಕಾ೦ತವೀಗ ನನ್ನ ಕಾಡಿದೇ..
ಒಂದೇ ಒಂದು ಮಾತು ನೀ ಚಂದವಾಗಿ ಆಡಿ
ನನ್ನ ತಾನವೆಲ್ಲಾ ಲೂಟಿ ಮಾಡಿದೆ!
ಉಸಿರಿನ ಬಿಸಿಯು, ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ
ಪದ ಗೀಚುವ ಬೆರಳೆರಡು
ಪದವಿಲ್ಲದೆ ಪರದಾಡಿದೆ..

ಇನ್ನೇಕೆ ಕಾಲ ಹರಣ, ದೂರಾನೆ ತುಂಬಾ ಕಠಿಣ
ನನ್ನಲ್ಲೇ ನೀಡು ಎಲ್ಲ ಸೂಚನೆ..
ಎಲ್ಲೇ ಹೋದರೂನು ನೀ ಎಲ್ಲೇ ಬಂದರೂನು
ನನಗೀಗ ನಿನ್ನದೊಂದೇ ಪ್ರಾರ್ಥನೆ!
ಜೀವದ ಭಾಷೆ, ಹೇಳಲು ನನಗೆ
ಜೀವವೇ ಹೋದ ಹಾಗಾಗಿದೆ!
ಅನುರಾಗದ ಅನುವಾದಕೆ
ಸರಿ ಹೋಗುವ ಪದವೆಲ್ಲಿದೆ..

ನನಮೇಲೆ ನನಗೀಗ ಅನುಮಾನ ಶುರುವಾಗಿದೆ..!

Click here for the details of

Leave A Reply

Your email address will not be published.