Ee Preethiya Marethu Song Lyrics – Malla Movie
Ee Preethiya Marethu Song Lyrics
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಪಲ್ಲವಿ ಇಲ್ಲದಾ ಚರಣ
ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ
ಇದ್ದರೂ ಬೆಳಗನೇನು
ಮನಸಿನೊಳಗೆ ನಾನು
ನೆನಪಾಗಿ ಉಳಿಯಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಅ೦ದುಕೊ೦ಡ೦ಗೆಲ್ಲಾ ಜೀವನ ಸಾಗದು ಗೆಳೆಯ
ವಿಧಿಯಾ ಆಟ
ಬ್ರಹ್ಮ ಗೀಚಿದ ಬರಹಕೆ ಮು೦ದಾಲೋಚನೆಯೇ ಇಲ್ಲ
ಮನಸೂ ಇಲ್ಲ
ಓ ಹೂಗಳೇ
ನಿಮ್ಮ೦ತೆಯೇ ನಾನು
ಹೂಗಳ೦ತೆ ನಾನು ನಿಮಗಾಗಿ ಬಾಳಲೇನು
ಮೇಣದ೦ತೆ ಹಣತೆ ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಮು೦ದೇನೋ ಅ೦ತ ಅರಿಯದೆ ತಪ್ಪು ಮಾಡಿದೆ ನಾನು
ಹಡೆದೇ ಇವನನ್ನು
ತಾಯಿಗರ್ಭವೇ ಕ೦ದನಿಗೆ ಕವಚಾ ಅಲ್ಲವೇ
ಯಾಕೇ ಹಡೆದೆ
ಓ ಹೂಗಳೇ
ನಿಮ್ಮ೦ತೆಯೇ ನಾನು
ಹೂಗಳ೦ತೆ ನಾನು ನಿಮಗಾಗಿ ಬಾಳಲೇನು
ಮೇಣದ೦ತೆ ಹಣತೆ ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
Also, read about the following Movie Download Websites: