Love Aagoythe Nin Myale Song Lyrics – The Villain Movie

0

Love Aagoythe Nin Myale Song Lyrics

ಐತ ಲಕ್ಕಡಿ ಪಕ್ಕಡಿ ಲಕ್ಕಡಿ
ಜುಮ್ಮ
ಕದ್ದು ಹೊತ್ಕೊಂಡ್ ಹೋಗ್ತಾನ್ ನೋಡು
ಗುಮ್ಮ

ಆಂಜನೇಯ, ಬಾರೊ ಎಲ್ಲಿದ್ದಿಯ
ಗದೆಯ ತಂದು ಅವ್ನ ಹೊಡೆದಾಕಯ್ಯ
ಕಳ್ಳೆಪುರಿಯನ್ನು ಕದ್ದು ತಂದಿರುವೆ
ಬಾರೋ… ಬಾರೋ… ಬಾರೋ…

ರೋಡಲ್ ನಿಂತು ಕಾಯ್ಲು ಇಲ್ಲ
ಹಿಂದೆ ಮುಂದೆ ಸುತ್ಲು ಇಲ್ಲ
ಮಾತುಗ್ ಸೈಡುಗ್ ಕರಿಲೇ ಇಲ್ವಲ್ಲೆ
ಏ.. ಏ.. ಏ.. ಏ..

ಮುಂದುಕ್ ಹೇಳ್ಳೇ

ಅವ್ವುನ್ ಕೇಳ್ಲೂ ಇಲ್ಲ
ಅಪ್ಪುಂಗ್ ಹೇಳ್ಲೂ ಇಲ್ಲ
ಲವ್ ಆಗೋಯ್ತೇ ನಿನ್ ಮ್ಯಾಲೆ

ಕಳ್ಳ ಕ್ರಿಷ್ಣ, ಗೋಪಿ ಕ್ರಿಷ್ಣ,
ರಾಧೆ ಕ್ರಿಷ್ಣ ಹೋಯ್

ಬೆಣ್ಣೆ ಕದ್ದ ಮುದ್ದು ಕ್ರಿಷ್ಣ
ರಾಧೆ ಕ್ರಿಷ್ಣ ಹೋಯ್

ಗೋಪಿಕೆರ ಸೀರೆ ಕದ್ದು
ದ್ರೌಪದಿಗೆ ದಾನ ಕೊಟ್ಟ

ನಾ ಪಿಳ್ಳಂಗೋವಿ ಊದ್ಲೇ ಇಲ್ಲ
ಪಿ ಟಿ ಮೇಡಮ್ ಕಲ್ಸ್ಲಿಲ್ಲ
ಅದಕೆ ಅವ್ಳು ಊದ್ಲಿಲ್ಲ

ನೀನು ಪಾರಿವಾಳ ಕಳ್ಸ್ಲೂ ಇಲ್ಲ
ಫೇಸ್ ಬುಕ್ ವಾಟ್ಸಾಪ್ ಇತ್ತಲ್ಲ
ಅದಕೆ ಅವಳು ಕಳ್ಸ್ಲಿಲ್ಲ

ಲವ್ ಲೆಟರ್ ಅಂತು
ನಂಗೆ ನೀನು ಬರ್ದು ಇಲ್ಲ
ರಾಧೆ ಬಂದು
ನಿನ್ನ ಬಗ್ಗೆ ಹೇಳ್ಲೂ ಇಲ್ಲ

ಗುಡಿಯ ಕಟ್ಟಿ ಯಾರೂ ಪೂಜಿಸ್ಲಿಲ್ಲ
ನಮಿಬ್ಬರ ಪ್ರೀತಿ ಹಿಸ್ಟರಿ ಅಲ್ಲ … ಆಆಆ…

ನೀನೇನ್ ರುಕ್ಕು ಅಲ್ಲ
ನಾನೇನ್ ಕ್ರಿಷ್ಣ ಅಲ್ಲ
ಲವ್ ಆಗೋಯ್ತೇ ನಿನ್ ಮ್ಯಾಲೆ
ಲವ್ ಆಗೋಯ್ತೇ ನಿನ್ ಮ್ಯಾಲೆ

ವಾರೆ ವಾರೆ ವಾರೆ ವಾರೆ
ರಾಮ ಬಂದ ನೋಡೆ
ವಾರೆ ವಾರೆ ವಾರೆ ವಾರೆ
ಜಿಂಕೆ ತಂದ ನೋಡೆ

ನಾನು ಬಿಲ್ಲು ಗಿಲ್ಲು ಮುರಿಲೇ ಇಲ್ಲ
ಮಮ್ಮಿ ಬೂಸ್ಟು ಕೊಡ್ಲಿಲ್ಲ
ಅದಿಕೆ ಮುರಿಯಕ್ ಆಗ್ಲಿಲ್ಲ
ನಿನ್ನ ಕಾಡುಗ್ ಕರ್ಕಂಡ್ ಹೋಗ್ಲೂ ಇಲ್ಲ
ಡೈನಾಸರಸ್ ಇತ್ತಲ್ಲ
ಅದಿಕೆ ಕರ್ಕೊಂಡ್ ಹೋಗ್ಲಿಲ್ಲ

ಜಿಂಕೆ ಬೇಕು ಅಂತ ನೀನು
ಕೇಳ್ಲೂ ಇಲ್ಲ
ರಾವಣ ಬಂದು ನಿನ್ನ
ಹೊತ್ಕೊಂಡ್ ಹೋಗ್ಲೂ ಇಲ್ಲ

ಕಪಿ ಸೈನ್ಯವ ಕಟ್ಟಿ
ಹುಡುಕಾಡ್ಲಿಲ್ಲ
ಲಂಕೆ ಸುಟ್ಟು ರಾವಣನ್
ಕೊಲ್ಲೂ ಇಲ್ಲ

ಅಯ್ಯಯ್ಯೊ ಮುಂದೆ?

ನೀನೇನ್ ಸೀತೆ ಅಲ್ಲ
ನಾನೇನ್ ರಾಮ ಅಲ್ಲ

ಲವ್ ಆಗೋಯ್ತೇ ನಿನ್ ಮ್ಯಾಲೆ
ಲವ್ ಆಗೋಯ್ತೇ ನಿನ್ ಮ್ಯಾಲೆ

Also, Click here for the details of Telugu Movies :

Leave A Reply

Your email address will not be published.