Yethake Bogase Thumba Lyrical Song – Bell Bottom Movie

0

Yethake Bogase Thumba  Song Lyrics

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?

ಈ.. ನಲ್ಮೆಯ..
ಬಾಯಿ ಬಿಡಲು ನನಗೊಂದು ಪದ ಬೇಕಿದೆ..
ಏನೆನ್ನಲಿ…
ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ..
ಕಣ್ಣು ಕಣ್ಣು ಕಳೆತಾಗ ಯಾಮಾರಿಸಿ..
ಕಳ್ಳ ಕನಸು ಬಚ್ಚಿಡುವೆ..
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ..

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ..?

ನಿನ್ನೋಪ್ಪಿಗೆ
ಇದೆಯಾ ಹೇಳು ಕಡುಪೋಲಿ ನಾನಾಗಲು..?
ನಿನ್ನಾಣೆಗೂ
ಕಾಯುತ್ತಿರುವೆ ಣಾ ಬೇಗ ಹಾಳಾಗಲೂ..
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ..
ನೀಡು ನಿನ್ನ ಸಹಕಾರ..
ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ…

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?

Also, Read about :

 

Leave A Reply

Your email address will not be published.