Anisuthidhe Lyrical Song – 99 Movie
Anisuthidhe Song Lyrics
ಅನಿಸುತಿದೆ..
ಮಗ್ಗುಲಲೇ ಮರಣವಿದೆ
ಅನಿಸುತಿದೆ..
ಇರುಳಿನಲು ನೆರಳು ಸಹ
ಬೆವರುತಿದೆ..
ಕನಸುಗಳ ಕಳೆಬರಹವು
ಕಣ್ಣಲ್ಲಿದೆ..!
ನೀ..
ಸಿಗದಿರಲೇನು ನನಗೆ
ನೀನಿರುವ ಜಗದೊಳಗೆ
ನಾನಿರುವೆ ಎನುವುದೇ
ಖುಶಿ ಕೊನೆಗೆ..
ಕೋರುವ ಮುನ್ನ..
ನಿನಗೆ ವಿದಾಯ..
ಕೋರುವೆ ಒಂದು..
ಸಣ್ಣ ಸಹಾಯ..
ನೀನಿರದೆ ಬದುಕಿರಲು
ಹೇಳು ಉಪಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!
ಈ..
ಇರುಳಿಗೆ ಏನೋ
ಹೆಸರು..
ಸಂತಸದ ಗರ್ಭದಲಿ, ಸಂಕಟವ ಹೆರುತಿದೆ
ಪ್ರತಿ ಉಸಿರು..
ಎದೆಯಲಿ ಇದ್ದ..
ಆರದ ಗಾಯ..
ಕೆದಕಿದ ಹಾಗೆ..
ಮತ್ತೆ ವಿದಾಯ..
ಕೇಳುವುದು ನಾನೀಗ..
ಯಾರಲಿ ನ್ಯಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!