Maathado Taareya Song Lyrics – Ambi Ning Vaayassaytho Movie

0

Maathado Taareya Song Lyrics in Kannada

ಮಾತಾಡೋ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ
ನಾನ್ ಯಾರೋ ಎಂಬುದೇ ಮರೆತ ಹಾಗೆ
ಮಿಂಚೊಂದು ಮೆಲ್ಲಗೆ ಮುಟ್ಟೀದ ಹಾಗೆ
ನಿನ್ನ ಕಣ್ಣ ಬಣ್ಣ ರಾತ್ರಿ ಹಾಗೆ …
ಅಲ್ಲೇ ನನ್ನ ಬಿಂಬ ಚಂದಿರ…
ನಿನ್ನ ಮುದ್ದು ಮುದ್ದು ಹಾಲುಗಲ್ಲ ನಾಜೂಕಾದ ನೇಸರ.
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ
ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ.
ಮಾತಾಡೋ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ
ಹಗುರಾದ ಗಾಳಿಗೆ ಇಂದು ಅಲೂಗೋದ
ಗೋಪುರದಂತೆ ಇ ನನ್ನ ಹರೆಯ ಆಗಿದೆ.
ಸಿರಿ ಗೌರಿ ಜೀವ ಕಳೆದು…
ನನಗಾಗಿ ತೆರಿಂದ ಎಳೆದು ಬಂದಂತೆ ಭಾಸ ಆಗಿದೇ…
ಮಾತು ಏಕೋ ಮೌನವನ್ನು ಹೊತ್ತುಕೊಂಡಿದೆ ಮೊಟ್ಟ ಮೊದಲು ಹೀಗೆ ನಾನು ಆದೇ… ಆದೆ.
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ
ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ.
ನದಿ ಹಾಗೆ ನನ್ನ ಹೆಜ್ಜೆ ಲಯ ಮೀರಿ ಹೋಗುವಾಗ ನಾ ಹೋಗೋ ದಾರಿ ಮರೆತೆನು.
ಬಾನಾಡಿ ರೆಕ್ಕೆ ಸದ್ದು ಮೂಡಿದಂತೆ ನಿನ್ನ ಹೆಸರು ಅನುರಾಗಿ ನಾನು ಆದೆನು…
ಕಾಲವೆಲ್ಲ ಖಾಲಿಯಾದ ಹಾಗೆ ಆಗಿದೆ ನೀನೇ ನನ್ನ ತುಂಬಿ ಹೋದೆ ಹೋದೆ…
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ.
ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ…
ಮಾತಾಡೋ ತಾರೆಯ ಕಂಡ ಹಾಗೆ…
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ…

Leave A Reply

Your email address will not be published.